ರಾಹುಲ್ ಗಾಂಧಿ ನಿನ್ನೆಯಷ್ಟೇ 52ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದ್ರೆ, ಅವರು ಸಂಭ್ರಮಾಚರಣೆಯ ಮನಸ್ಥಿತಿಯಲ್ಲಿ ಇಲ್ಲ. ಕಾರಣ ನ್ಯಾಷನಲ್ ಹೆರಾಲ್ಡ್ ಕೇಸ್ ಮತ್ತು ತಾಯಿ ಸೋನಿಯಾ ಗಾಂಧಿ ಅನಾರೋಗ್ಯ. ಮೂರು ದಿನಗಳ ವಿರಾಮದ ಬಳಿಕ ಇಂದು ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ನಡುವೆ ರಾಹುಲ್ ಗಾಂಧಿ ಇಡಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಲು ಸನ್ನದ್ಧವಾಗಿದೆ. ಈ ಹಿನ್ನಲೆಯಲ್ಲಿ ಎಐಸಿಸಿ ಮತ್ತು ಇಡಿ ಕಚೇರಿಯ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಇನ್ನು ರಾಹುಲ್ ಗಾಂಧಿ ವಿಚಾರಣೆಗೆ ಸಂಬಂಧಿಸಿದ ಮಾಹಿತಿಯನ್ನು ಕೆಲವು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಾನೂನು ಸಚಿವ ಕಿರಣ್ ರಿಜಿಜುಗೆ ಲೀಗಲ್ ನೋಟಿಸ್ ಕಳಿಸಿದೆ. ಕಳೆದ ಸೋಮವಾರದಿಂದ ಮೂರು ದಿನ ಸುಮಾರು 30 ಗಂಟೆಗಳ ಕಾಲ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂದಿ ವಿಚಾರಣೆ ಎದುರಿಸಿದ್ರು. ಗುರುವಾರ ಇ.ಡಿ ಬಿಡುವು ನೀಡಿತ್ತು. ಶುಕ್ರವಾರ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ, ತಾಯಿಗೆ ಅನಾರೋಗ್ಯದ ಕಾರಣ ಎರಡು ದಿನ ವಿಚಾರಣೆಯಿಂದ ವಿನಾಯ್ತಿ ನೀಡುವಂತೆ ರಾಹುಲ್ ಗಾಂಧಿ ಮನವಿ ಮಾಡಿಕೊಂಡಿದ್ರು. ಇದಕ್ಕೆ ಇ.ಡಿ ಕೂಡ ಸ್ಪಂದಿಸಿತ್ತು.
#publictv #newscafe #hrranganath #rahulgandhi